ಉಳುವಿ ಚನ್ನಬಸವೇಶ್ವರ ಜಾತ್ರೆಗೆ ದೇಗುಲದ ಟ್ರಸ್ಟಿಗಳ ವಿರೋಧ!

ಚಿತ್ರದುರ್ಗ, ಮಂಗಳವಾರ, 12 ಫೆಬ್ರವರಿ 2019 (18:40 IST)

ಉಳುವಿ ಜಾತ್ರೆ ಚಾಲನೆಗೆ ದೇಗುಲದ ಟ್ರಸ್ಟಿಗಳಿಂದ ವ್ಯಕ್ತವಾಗಿದೆ.

ಕಾರವಾರ ಜಿಲ್ಲೆ ಉಳುವಿ ಚನ್ನಬಸವೇಶ್ವರ ಜಾತ್ರೆ ಚಾಲನೆಗೆ ದೇಗುಲದ ಟ್ರಸ್ಟಿಗಳ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಮುರುಘಾ ಶರಣರಿಂದ ಸುದ್ದಿಗೋಷ್ಠಿ ನಡೆಯಿತು. ಮುರುಘಾಮಠದ ಪರಂಪರೆ ಉಳಿಸುವಂತೆ ಮನವಿ ಮಾಡಿದ ಶ್ರೀಗಳು, ಜಯದೇವ, ಮಲ್ಲಿಕಾರ್ಜುನ ಶ್ರೀಗಳ ಕಾಲದಿಂದಲೂ ಉಳುವಿಯಲ್ಲಿ ಶಿವಾನುಭವ, ಪರಂಪರೆ ಉಳಿಸಿಕೊಂಡು ಬರಲಾಗಿದೆ.

ಉಳುವಿಯ ಚನ್ನಬಸವಣ್ಣನವರ ಜಾತ್ರೆಯಲ್ಲಿ ಲಕ್ಷಂತರ ಜನ ಭಾಗವಹಿಸುತ್ತಾರೆ.
ಈ ಜಾತ್ರೆಯಲ್ಲಿ ಜಂಗಮ ದಾಸೋಹ ಮುರುಘಾಮಠದ ಪ್ರಮುಖ ವೈಶಿಷ್ಟ್ಯವಾಗಿದೆ. ಕೆಲವು ಪಟ್ಟಬದ್ರ ಹಿತಾಸಕ್ತಿಗಳು ಮುರುಘಾ ಶರಣರ ಪರಂಪರೆಗೆ ವಿರೋಧಿಸಿದ್ದಾರೆ ಎಂದರು.

ದೇವಸ್ಥಾನದ ಕೆಲ ಟ್ರಸ್ಟಿಗಳು ಮಾಡಿಕೊಂಡಿರುವ ಕೌಟಂಬಿಕ ಸಮಿತಿಯನ್ನು ಶ್ರೀಗಳು ಪ್ರಶ್ನಿಸಿದ್ದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಅದೇ ಕಾರಣಕ್ಕೆ ಚನ್ನಬಸವೇಶ್ವರ ಜಾತ್ರೆಯ ಚಾಲನೆಗೆ ವಿರೋಧ ಮಾಡುತ್ತಿದ್ದಾರೆ ಎಂದರು.

ಈ ವಿಚಾರವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ನ್ಯಾಯಾಲಯದ ಆದೇಶದಂತೆ ಮುಂದುವರೆಯುವುದಾಗಿ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿಕೆ ನೀಡಿದರು.  


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನನ್ನ ಜೊತೆ ಕಾಂಗ್ರೆಸ್‌ನಲ್ಲಿದ್ದವರು ಬಿಜೆಪಿಗೆ ಬರಬೇಕು ಎಂದ ಮಾಜಿ ಸಿಎಂ!

ಕಾಂಗ್ರೆಸ್ ನಲ್ಲಿ ನನ್ನ ಜತೆಯಲ್ಲಿ ಇದ್ದವರು ಈಗ ಬಿಜೆಪಿಗೆ ಬರಬೇಕು. ಹೀಗಂತ ಮಾಜಿ ಸಿಎಂ ಹೇಳಿಕೆ ...

news

ಎಂಪಿ ಟಿಕೆಟ್ ಆಗ್ರಹಿಸಿ ನಡೆಯಿತು ಪಾದಯಾತ್ರೆ

ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭಗೊಂಡಿರುವಂತೆ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಗಾಗಿ ಒತ್ತಡ ತಂತ್ರಕ್ಕೆ ...

news

ರಥರಪ್ತಮಿ ಉತ್ಸವದ ಸಡಗರ ಎಲ್ಲಿದೆ?

ರಥಸಪ್ತಮಿ ದಿನ ಪವಿತ್ರ ಕಲ್ಯಾಣಿಯಲ್ಲಿ ಮಿಂದೆದ್ದ ಭಕ್ತರು, ದೇವರ ದರ್ಶನ ಪಡೆದು ಪುನೀತರಾದರು.

news

ಕೆಲಸ ಮಾಡ್ತಿದ್ದ ಮಹಿಳೆಯರಿಗೆ ಒಬ್ಬೊಬ್ಬರಾಗಿ ಮನೆಗೆ ಬಾ ಅಂತ ಕರೆಯುತ್ತಿದ್ದ ಕಾಮುಕ ಅಧಿಕಾರಿ?

ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಒಬ್ಬೊಬ್ಬರಾಗಿ ಮನೆಗೆ ಬರುವಂತೆ ಕರೆಯುತ್ತಿದ್ದ ಅಧಿಕಾರಿ ಮಹಿಳೆಯರ ಮೈಕೈ ...