ಕನ್ನಡ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಅಗೆಯಲಾಗಿದ್ದ ಎರಡು ಕೊಠಡಿಗಳ ಅಡಿಪಾಯವನ್ನು ರಾತ್ರೋರಾತ್ರಿ ಮುಚ್ಚಿಸಿರುವ ಘಟನೆ ನಡೆದಿದೆ. ಮರಾಠಿ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು ರಾತ್ರೋರಾತ್ರಿ ಅಡಿಪಾಯ ಮುಚ್ಚಿಸಿದ್ದಾರೆ. ಮಹಾರಾಷ್ಟ್ರ - ಕರ್ನಾಟಕ ಗಡಿಯ ಮಾನಕಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಡಿ ಗ್ರಾಮ ಮಾನಕಾಪುರದಲ್ಲಿ ಕನ್ನಡ ಶಾಲೆ ವಿದ್ಯಾರ್ಥಿಗಳ ಅನುಕೂಲಕ್ಕೆ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಎರಡು ಕೊಠಡಿ ಮಂಜೂರು ಮಾಡಿಸಿದ್ದರು. ಕಟ್ಟಡ ನಿರ್ಮಾಣಕ್ಕೆ ಎಸ್.ಡಿ.ಎಂ.ಸಿ ಸದಸ್ಯರು