ರಾಜ್ಯಕ್ಕೆ ನೀರು ಬಿಡುಗಡೆಗೆ ವಿರೋಧ; ಮಹಾ ಸಿಎಂಗೆ ಪತ್ರ ಬರೆದ ಶಾಸಕ

ಚಿಕ್ಕೋಡಿ, ಶುಕ್ರವಾರ, 10 ಮೇ 2019 (17:11 IST)

ಕರ್ನಾಟಕ ರಾಜ್ಯಕ್ಕೆ ನೀರು ಬಿಡುಗಡೆ ವಿರೋಧಿಸಿ ಮುಖ್ಯಮಂತ್ರಿಗೆ ಶಾಸಕರೊಬ್ಬರು ಬರೆದಿದ್ದಾರೆ.

ಮುಖ್ಯಮಂತ್ರಿ ಫಡ್ನವಿಸ್ ಗೆ ಶಿವಸೇನೆ ಶಾಸಕನಿಂದ ಪತ್ರ ಬರೆಯಲಾಗಿದೆ. ಸಿಎಂ ದೇವೇಂದ್ರ ಫಡ್ನವಿಸ್ ಗೆ ಪತ್ರ ಬರೆದಿದ್ದಾರೆ ಶಂಭುರಾಜ ದೇಸಾಯಿ.

ಶಾಸಕ ದೇಸಾಯಿ, ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯ ಪಾಟಣ್ ಕ್ಷೇತ್ರದ ಶಾಸಕರಾಗಿದ್ದಾರೆ.
ಕೃಷ್ಣಾ ನದಿಗೆ ಕೊಯ್ನಾ ಡ್ಯಾಂ ನಿಂದ ನೀರು ಬಿಡುಗಡೆ ಮಾಡದಂತೆ ಪತ್ರ ಬರೆದಿದ್ದಾರೆ.
105 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಕೊಯ್ನಾ ಡ್ಯಾಂನಲ್ಲಿ ಪ್ರಸ್ತುತ 36.89 ಟಿಎಂಸಿ ನೀರು ಸಂಗ್ರಹವಿದೆ. ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯಲ್ಲಿರುವ ಡ್ಯಾಂ ಇದಾಗಿದೆ.

ಕೃಷ್ಣಾ ನದಿಗೆ 4 ಟಿಎಂಸಿ ನೀರು ಕೇಳಿದೆ ಕರ್ನಾಟಕ ಸರ್ಕಾರ.

ಕರ್ನಾಟಕದಲ್ಲಿ ಬತ್ತಿ ಬರಿದಾಗಿರೋ ಕೃಷ್ಣಾ ನದಿಗೆ ನೀರು ಹರಿಸುವಂತೆ ಕೋರಲಾಗಿದೆ. ರಾಜ್ಯದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಕೃಷ್ಣಾ ನದಿ ಹರಿಯುತ್ತದೆ.

ಮೇ 8 ರಂದು ಸಿಎಂ ಫಡ್ನವಿಸ್ ಗೆ ಪತ್ರ ಬರೆದಿರುವ ಶಾಸಕ ದೇಸಾಯಿ ಕ್ರಮಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.  

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಿಷ್ಯನ ಪುತ್ರನ ವಿರುದ್ಧ ಸಿದ್ದರಾಮಯ್ಯ ಭಾರೀ ಪ್ರಚಾರ

ಚಿಂಚೋಳಿ ಕ್ಷೇತ್ರದಲ್ಲಿ ಇಂದಿನಿಂದ 3 ದಿನಗಳ ಕಾಲ ಮಾಜಿ ಸಿಎಂ ಸಿದ್ರಾಮಯ್ಯ ಕ್ಯಾಂಪೇನ್ ನಡೆಸುತ್ತಿದ್ದಾರೆ.

news

ಪ್ರಖ್ಯಾತ ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ

ಪ್ರಖ್ಯಾತ ಜವಳಿ ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಘಟನೆಗೆ ವ್ಯಾಪಕ ಖಂಡನೆ, ಪ್ರತಿಭಟನೆಗಳು ...

news

ಜಾರಕಿಹೊಳಿ ತೆಕ್ಕೆಗೆ ಬೆಳಗಾವಿ ಕೆಎಂಎಫ್

ಬೆಳಗಾವಿ ಕೆಎಂಎಫ್ ಅಧ್ಯಕ್ಷ ಸ್ಥಾನ ಜಾರಕಿಹೊಳಿ ತೆಕ್ಕೆಗೆ ಸರಿದಿದೆ.

news

ಬೈ ಎಲೆಕ್ಷನ್; ಬಿಜೆಪಿ ಪ್ರಚಾರ ಜೋರು

ಕುಂದಗೋಳ ಉಪಚುನಾವಣೆ ಹಿನ್ನೆಲೆಯಲ್ಲಿ ಮುಂದುವರೆದಿದೆ ಬಿಜೆಪಿ ನಾಯಕರ ಭರ್ಜರಿ ಪ್ರಚಾರ.