ಮಹಾನಗರ ಪಾಲಿಕೆಯ ನೂತನ ಕಟ್ಟಡಕ್ಕೆ ರಾತ್ರೋರಾತ್ರಿ ಉರ್ದು ನಾಮ ಫಲಕ ಹಾಕಿರುವುದನ್ನು ವಿರೋಧಿಸಿ ಪಾಲಿಕೆಯ ಪ್ರತಿಪಕ್ಷದ ಸದಸ್ಯರು ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ಕೈಗೊಂಡು ತಕ್ಷಣವೇ ಇಲ್ಲಿನ ಉರ್ದು ನಾಮಫಲಕವನ್ನು ತೆಗೆದು ಹಾಕುವಂತೆ ಒತ್ತಾಯಿಸಿದರು.ಕಲಬುರಗಿ ಮಹಾನಗರ ಪಾಲಿಕೆಯ 1978ರ ನಿಯಮ 78ರ ಪ್ರಕಾರ ಪಾಲಿಕೆಯ ಕಚೇರಿಗಳಲ್ಲಿ ಉರ್ದು ಭಾಷೆಯ ನಾಮಫಲಕಗಳನ್ನು ಹಾಕುವಂತಿಲ್ಲ ಆದರೆ ಕೆಲ ಕಿಡಿಗೇಡಿಗಳು ರಾತ್ರೋರಾತ್ರಿ ಇಲ್ಲಿನ ಪಾಲಿಕೆಯ ನೂತನ ಕಾರ್ಯಾಲಯದ ಕಟ್ಟಡದಲ್ಲಿ ಉರ್ದು