ನವದೆಹಲಿ(ಆ.12): ಸಂಸತ್ ಕಲಾಪದ ಕೊನೆಯ ದಿನ ಕೂಡ ವಿಪಕ್ಷಗಳು ರಾಜ್ಯಸಭೆಯಲ್ಲಿ ತೀವ್ರ ಕೋಲಾಹಲ ಎಬ್ಬಿಸಿ, ಮಾರ್ಷಲ್ಗಳೊಂದಿಗೆ ಸಂಘರ್ಷ ನಡೆಸಿದ ಘಟನೆ ನಡೆದಿದೆ. ಕಾಗದಪತ್ರಗಳನ್ನು ವಿಪಕ್ಷ ಸದಸ್ಯರು ಹರಿದು ತೂರಾಡಿದ್ದಾರೆ. ಒಬಿಸಿ ಮಸೂದೆ ಪಾಸಾದ ಬಳಿಕ ವಿಮಾ ಕಂಪನಿಗಳ ಖಾಸಗೀಕರಣ ವಿಧೇಕಯವನ್ನು ಸರ್ಕಾರ ಕೈಗೆತ್ತಿಕೊಂಡಿತು. ಆಗ ಇದನ್ನು ವಿರೋಧಿಸಿ ವಿಪಕ್ಷ ಸದಸ್ಯರು ಸಭಾಪತಿ ಪೀಠದತ್ತ ಮುನ್ನುಗ್ಗಲು ಯತ್ನಿಸಿದರು. ಅವರನ್ನು ತಡೆಯಲು 50 ಪುರುಷ/ಮಹಿಳಾ ಮಾರ್ಷಲ್ಗಳನ್ನು ನಿಯೋಜಿಸಲಾಯಿತು. ಈ ವೇಳೆ ಮಾರ್ಷಲ್ಗಳು ಹಾಗೂ