ಮೈಸೂರು : ದೇವಸ್ಥಾನಗಳಲ್ಲಿ ಡ್ರೆಸ್ಕೋಡ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಡ್ರೆಸ್ಕೋಡ್ ಕಡ್ಡಾಯ ಮಾಡಬೇಕೆಂಬ ಕೂಗು ಜೋರಾಗಿದೆ. ಈ ಬಗ್ಗೆ ಹಲವು ಮಹಿಳಾ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳೂ ಕೂಡ ಧ್ವನಿಗೂಡಿಸಿವೆ. ರಾಜ್ಯದ ಹಾಗೂ ಹೊರ ರಾಜ್ಯದ ಪ್ರಮುಖ ದೇವಸ್ಥಾನಗಳ ಪ್ರವೇಶಕ್ಕೆ ವಸ್ತ್ರಸಂಹಿತೆ ಇದೆ. ಇದೇ ರೀತಿ ನಾಡದೇವತೆ ಚಾಮುಂಡಿ ದರ್ಶನಕ್ಕೂ ವಸ್ತ್ರಸಂಹಿತೆ ಜಾರಿ ಮಾಡುವಂತೆ ಆಗ್ರಹಿಸಲಾಗಿದೆ.ಚಾಮುಂಡಿ ದೇವಸ್ಥಾನದಲ್ಲಿ ಈವರೆಗೂ