ಅಲ್ಲಿ ಇಂದು ಹೂವು, ಮಾವಿನ ತೋರಣ, ರಂಗೋಲಿಗಳಿಂದ ಆಲಂಕೃತಗೊಂಡ ನಿಲಯದಲ್ಲಿ ದೈನಂದಿನ ಕಚೇರಿ ಕೆಲಸದಲ್ಲಿ ನಿರತರಾಗುತ್ತಿದ್ದ ಅಧಿಕಾರಿ-ಸಿಬ್ಬಂದಿಗಳು ಮದುವೆಯ ಶಾಸ್ತ್ರದ ಕಾರ್ಯದಲ್ಲಿ ಬ್ಯೂಸಿಯಾಗಿದ್ದು ಕಂಡುಬಂತು.ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ವಸತಿ ನಿಲಯದಲ್ಲಿ ಮದುವೆಯ ಸಂಭ್ರಮದ ಮನೆಮಾಡಿತು. ನಿಲಯದಲ್ಲಿ ಕಳೆದ 4 ವರ್ಷದಿಂದ ನಿವಾಸಿಯಾಗಿರುವ ಅಂಬಿಕಾ ಮತ್ತು 7 ವರ್ಷಗಳಿಂದ ನಿವಾಸಿಯಾಗಿರುವ ಅಶ್ವಿನಿಯ ಮದುವೆ ಸಮಾರಂಭ ನಡೆಯಿತು.ಅನಾಥೆಯರಿಗೆ ಆಶ್ರಯಕೊಟ್ಟ ಮಹಿಳಾ ನಿಲಯವು ನಿವಾಸಿಗಳ ಒಪ್ಪಿಗೆ ಪಡೆದು ಅವರ ಮುಂದಿನ