ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಇಂದು ಬೆಳಿಗ್ಗೆ ಯಶಸ್ವಿಯಾಗಿ ಮೆದುಳಿನ ಶಸ್ತ್ರಚಿಕಿತ್ಸೆ ನಡೆದಿದ್ದು, ಶೀಘ್ರ ಚೇತರಿಸಿಕೊಳ್ಳುವ ಭರವಸೆ ಮೂಡಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಆಸ್ಕರ್ ಫರ್ನಾಂಡೀಸ್ ಅವರಿಗೆ ಮೆದುಳಲ್ಲಿ ರಕ್ತ ಹೆಪ್ಪುಗಟ್ಟಿದ್ದನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಹಾಕಲಾಯಿತು. ತಡರಾತ್ರಿ 12ರಿಂದ ಆರಂಭವಾದ ಶಸ್ತ್ರಚಿಕಿತ್ಸೆಯು ನಸುಕಿನ ಜಾವ 5. 30ರವರೆಗೂ ನಡೆಯಿತು. ಯೆನೆಪೊಯ ಆಸ್ಪತ್ರೆಯ ಡಾ. ದಿವಾಕರ್ ರಾವ್, ಎ. ಜೆ.