ಬೀದರ್ ಜಿಲ್ಲೆಯ ಬಸವಕಲ್ಯಾಣ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೀದರ್ ನಗರದ ಬಸವೇಶ್ವರ ವೃತ್ತದಿಂದ ಡಿಸಿ ಕಚೇರಿವರೆಗೆ ರ್ಯಾಲಿ ನಡೆಯಿತು.ರ್ಯಾಲಿ ಮುಖಾಂತರ ಪ್ರತಿಭಟನೆ ನಡೆಸಿದ ಬೀದರ್ ಪತ್ರಕರ್ತ ಸಂಘಟನೆಗಳ ಒಕ್ಕೂಟದ ಸದಸ್ಯರು, ಅವಹೇಳನಕಾರಿ ಮಾತನಾಡಿದ ಶಾಸಕರ ಕ್ರಮ ಖಂಡಿಸಿದರು.ಶಾಸಕ ಬಿ.ನಾರಾಯಣರಾವ್ ವಿರುದ್ಧ ನ್ಯಾಯಾಲಯಕ್ಕೆ ಪತ್ರಕರ್ತರ ಸಂಘದಿಂದ ದೂರು ಸಲ್ಲಿಸಲು ನಿರ್ಧಾರ ಮಾಡಲಾಯಿತು. ಒಂದು ವಾರದೊಳಗೆ ಶಾಸಕ ಬಿ.ನಾರಾಯಣರಾವ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ