ಹಾಲಿ ಎಂಎಲ್ಸಿ ಧರ್ಮೇಗೌಡ ಅಧೀನದಲ್ಲಿ ಇರುವಂತಹ ಪವನ್ ವೈನ್ ಮದ್ಯದಂಗಡಿ ಅನ್ನು ಸಕರಾಯಪಟ್ಟಣ ಹೃದಯ ಭಾಗದಲ್ಲಿರುವ ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಸ್ಥಳಾಂತರಗೊಳಿಸಲು ನಿರ್ಧರಿಸಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.ಸಾರ್ವಜನಿಕ ಸ್ಥಳದಲ್ಲಿ ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಸಕ್ಕರಾಯಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಇದಕ್ಕೆ ಸ್ಥಳೀಯರ ಆಕ್ರೋಶವೂ ವ್ಯಕ್ತವಾಗಿದೆ. ಬಂಜಾರ್ ಸಮುದಾಯದವರು ಎಲ್ಲರೂ ಸೇರಿ ನಿರ್ಮಿಸಿರುವ ಲೇಔಟ್ನಲ್ಲಿ ಧನಂಜಯ್ ಎಂಬಾತನಿಂದ 47*48 ಅಳತೆಯ ನಿವೇಶನವನ್ನು ಖರೀದಿಸಿ ಈ