ನವಿಲು ಗರಿ ಮಾರಾಟ, ಕೋಳಿ, ಮೀನು ಮಾರಾಟ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಗೂಬೆ ಮಾರಾಟಕ್ಕೆ ಕೆಲವರು ಯತ್ನಿಸುತ್ತಿರುವ ಘಟನೆ ವರದಿಯಾಗಿದೆ. ಅಂದಹಾಗೆ ಗಡಿ ಜಿಲ್ಲೆಯಾಗಿರುವ ಚಾಮರಾಜನಗರದಲ್ಲಿ ಈ ಘಟನೆ ನಡೆದಿದೆ. ಗುಂಡ್ಲುಪೇಟೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಸಿಕ್ಕಿಬಿದ್ದ ವ್ಯಕ್ತಿ ಗೂಬೆಯನ್ನು ಜನರಿಗೆ ಮಾರಾಟ ಮಾಡುತ್ತಿದ್ದ. ಗೂಬೆ ಮಾರಾಟದ ಹಿನ್ನೆಲೆಯಲ್ಲಿ ಬೇರಂಬಾಡಿ ಗ್ರಾಮದ ಮನು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಗೂಬೆ ಮಾರಾಟ ಮಾಡುತ್ತಿದ್ದಾರೆ