ಲೋಕಸಭೆ ಚುನಾವಣೆಗೂ ಮೊದಲೇ ಆ ಕ್ಷೇತ್ರದಲ್ಲಿ ಸ್ವಂತ ಮನೆ ಪಾಲಿಟಿಕ್ಸ್ ಜೋರಾಗುತ್ತಿದೆ. ಮಂಡ್ಯದಲ್ಲಿ ಸ್ವಂತ ಮನೆ ಪಾಲಿಟಿಕ್ಸ್ ಶುರುವಾಗಿದೆ. ಮಂಡ್ಯದಲ್ಲಿ ಐದು ಎಕರೆ ಕೃಷಿ ಜಮೀನು ಖರೀದಿಸಿ, ಸ್ವಂತ ಮನೆ ನಿರ್ಮಾಣಕ್ಕೆ ನಿಖಿಲ್ ಕುಮಾರಸ್ವಾಮಿ ಮುಂದಾಗಿದ್ದಾರೆ.ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಿರುವ ನಿಖಿಲ್ ಕುಮಾರಸ್ವಾಮಿ, ಸ್ವಂತ ಮನೆ ನಿರ್ಮಿಸಬೇಕೆಂದು ಮೊನ್ನೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಇಚ್ಛೆ ವ್ಯಕ್ತಪಡಿಸಿದ್ದರು. ಮಂಡ್ಯದಲ್ಲೇ ನೆಲೆಸಿ ನಿಮ್ಮ ಕಷ್ಟಗಳಿಗೆ ಧ್ವನಿಯಾಗುತ್ತೇನೆ ಎಂಬ ಸಂದೇಶ ಜಿಲ್ಲೆಯ