ಬೆಂಗಳೂರು: ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ವಿಧಿಸಿ ರಾಜ್ಯ ಸರ್ಕಾರ ಪ್ಯಾಕೇಜ್ ಭರವಸೆಯನ್ನೇನೋ ಕೊಡುತ್ತಿದೆ. ಆದರೆ ಈ ಪ್ಯಾಕೇಜ್ ಗಳು ಮಧ್ಯಮ ವರ್ಗದವರನ್ನು ತಲುಪುತ್ತಿಲ್ಲ ಎನ್ನುವುದು ವಿಪರ್ಯಾಸ.ಅತ್ತ ಬಿಪಿಎಲ್ ಕಾರ್ಡ್ ಇಲ್ಲ, ಇತ್ತ ತೀರಾ ಬಡವರೂ ಅಲ್ಲ ಎನ್ನುವಂತಹ ಮಧ್ಯಮ ವರ್ಗದವರಿಗೆ ಯಾವ ಪರಿಹಾರವೂ ಸಿಗುತ್ತಿಲ್ಲ. ಕೊರೋನಾ, ಲಾಕ್ ಡೌನ್ ನಿಂದಾಗಿ ಅವರ ಆದಾಯಕ್ಕೂ ಪೆಟ್ಟು ಬಿದ್ದಿದೆ. ಆದರೆ ಸರ್ಕಾರದಿಂದ ಈ ವರ್ಗದವರಿಗೆ ನೆರವು ಸಿಗುತ್ತಿಲ್ಲ.ಖಾಸಗಿ ಕಂಪನಿಗಳಲ್ಲಿ ಸಾಧಾರಣ ವೇತನ