Widgets Magazine

ಪಾಗಲ್ ಪ್ರೇಮಿಯ ಕಾಮದ ಕಾಟಕ್ಕೆ ಜೀವ ಬಿಟ್ಟ ಯುವತಿ

ಮೈಸೂರು| Jagadeesh| Last Modified ಗುರುವಾರ, 13 ಫೆಬ್ರವರಿ 2020 (14:41 IST)
ಯುವತಿಯೊಬ್ಬಳು ಪ್ರಿಯಕರನ ಕಾಮದ ಕಾಟದಿಂದ ಬೇಸತ್ತು ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ.

ಮೇಘನಾ (19) ಆತ್ಮಹತ್ಯೆ ಮಾಡಿಕೊಂಡಿರೋ ಪ್ರೇಯಸಿಯಾಗಿದ್ದರೆ, ಮಣಿಕಂಠ ಕಾಮದ ಕಾಟ ಕೊಡುತ್ತಿದ್ದವನಾಗಿದ್ದಾನೆ.

ಮಣಿಕಂಠ – ಮೇಘನಾ ಇಬ್ಬರೂ ಲವ್ ಮಾಡಿದ್ದಾರೆ. ಆಗ ಖಾಸಗಿಯಾಗಿದ್ದ ಫೋಟೊಗಳನ್ನು ತೆಗೆದುಕೊಂಡಿದ್ದನು ಮಣಿಕಂಠ.
ಇವರ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಮೇಘನಾ ಬೇರೊಬ್ಬನೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾಳೆ.

ಇದರಿಂದ ರೋಸಿಹೋದ ಮಣಿಕಂಠ, ಎಂಗೇಜ್ ಮೆಂಟ್ ನ್ನು ಮುರಿಯೋಕೆ ಮುಂದಾಗಿ ತಮ್ಮಿಬ್ಬರ ಫೋಟೋಗಳನ್ನು ಮದುವೆ ಆಗೋ ಹುಡುಗನಿಗೆ ಕಳಿಸಿದ್ದಾನೆ.

ನನಗೆ ಬೇಕು ಎಂದಾಗ ಬಂದು ಸುಖ ನೀಡಬೇಕು ಅಂತ ಹುಡುಗಿಗೆ ಬೆದರಿಕೆ ಹಾಕಿದ್ದಾನೆ. ಇವನ ಕಾಟದಿಂದ ಬೇಸತ್ತ ಮೇಘನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೈಸೂರಿನ ನಂಜನಗೂಡು ತಾಲೂಕಿನ ಮೆಲ್ಲಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಯುವತಿಯ ಪೋಷಕರು ದೂರು ನೀಡಿದ್ದು, ಪೊಲೀಸರು ಮಣಿಕಂಠನಿಗಾಗಿ ಹುಡುಕಾಟ ನಡೆಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :