ಬೆಂಗಳೂರು : ಮುಂದಿನ ವರ್ಷದಿಂದ 2 ದಿನಗಳ ಕಾಲ ಚಿತ್ರಸಂತೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರಕಲಾ ಪರಿಷತ್ಗೆ ಸಲಹೆ ನೀಡಿದ್ದಾರೆ.20ನೇ ಚಿತ್ರಸಂತೆ ಉದ್ಘಾಟನೆ ಮಾಡಿದ ಸಿಎಂ ಬೊಮ್ಮಾಯಿ, ಆಯೋಜಕರಿಗೆ 2 ದಿನ ಸಂತೆ ಆಯೋಜನೆಗೆ ಸೂಚನೆ ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರಕಲೆ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಮಾಧ್ಯಮ.ಮನದಾಳದ ಮಾತುಗಳು ಮತ್ತು ಭಾವನೆಗಳನ್ನು ಚಿತ್ರಕಲೆ ಮೂಲಕ ವ್ಯಕ್ತಪಡಿಸಲಾಗುತ್ತದೆ. ಚಿತ್ರಕಲೆ ತಿಳಿದುಕೊಳ್ಳುವ ಪ್ರಯತ್ನ ಸಾರ್ವಜನಿಕರು ಮಾಡಬೇಕು. ಚಿತ್ರಕಲಾ ಪರಿಷತ್ತು