ಪಾಕ್ ಗೆಲುವಿಗೆ ರಾಜ್ಯದ ಕೆಲವೆಡೆ ಸಂಭ್ರಮಾಚರಣೆ: ಸ್ಥಳೀಯರ ಆಕ್ರೋಶ

ಬೆಂಗಳೂರು| chandralekha| Last Modified ಮಂಗಳವಾರ, 20 ಜೂನ್ 2017 (11:29 IST)
ಬೆಂಗಳುರು:ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕಿಸ್ತಾನ ತಂಡ ಗೆಲುವು ಸಾಧಿಸಿದ ಬೆನ್ನಲ್ಲೇ ಕಾಶ್ಮೀರದಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ ಎಂಬುದು ತಿಳಿದ ವಿಚಾರ. ಆದರೆ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿಯೂ ಕೂಡ ಪಾಕ್ ಗೆಲುವಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ಎನ್ನಲಾಗಿದೆ.
 
ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ, ಹಾವೇರಿ ಜಿಲ್ಲೆಯ ಸವಣೂರು, ದಾವಣಗೆರೆ ನಗರದ ವಿನೋಬಾನಗರ, ಕೊಡಗಿನ ಸುಂಟಿಕೊಪ್ಪ, ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ಒಂದು ಕೋಮಿನ ಯುವಕರ ಗುಂಪು ಪಟಾಕಿ ಸಿಡಿಸಿ ಸಂಭ್ರಮಿಸಿ ‘ಪಾಕಿಸ್ತಾನ್‌ ಜಿಂದಾಬಾದ್‌' ಎಂಬ ಘೋಷಣೆಗಳನ್ನು ಕೂಗಿದೆ. ಇವರೊಂದಿಗೆ ಕೆಲ ಕಿಡಿಗೇಡಿಗಲೂ ಸೇರಿಕೊಂಡಿದ್ದಾರೆ. ಇದರಿಂದ  ಆಕ್ರೋಶಗೊಂಡ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
 
ಹಿಪ್ಪರಿಗಿಯಲ್ಲಿ ಕೆಲದಿನಗಳ ಹಿಂದೆ ಕೇರಳದಿಂದ ವ್ಯಾಪಾರಕ್ಕಾಗಿ ಒಂದು ಕೋಮಿನ ಯುವಕರು ಬಂದಿದ್ದು ಅವರೇ ಈ ಕೆಲಸ ಮಾಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಅಂಥವರನ್ನು ಬಂಧಿಸಿ ಗಡೀಪಾರು ಮಾಡಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.
 


ಇದರಲ್ಲಿ ಇನ್ನಷ್ಟು ಓದಿ :