ಕಳೆದ ವರ್ಷ ಜೂನ್ ತಿಂಗಳಲ್ಲಿ ಈತ ಹೃದಯಾಘಾತದಿಂದ ಮೃತಪಟ್ಟಿದ್ದ ಅಂತಾ ಕುಟುಂಬಸ್ಥರು ಹಾಗೂ ಈತನ ಹೆಂಡತಿ ಸೇರಿಕೊಂಡು ಅಂತ್ಯಕ್ರಿಯೆ ನಡೆಸಿದ್ದರು. ಆದರೆ 6 ತಿಂಗಳ ಹಿಂದಿನ ಸ್ಟೋರಿಗೆ ಈ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದಕ್ಕೆ ಕಾರಣ ಮೃತ ಆಂಜನೇಯನ ಮಕ್ಕಳು ತನ್ನ ಅಜ್ಜಿ ಬಳಿ ಹೇಳಿದ್ದ ಅದೊಂದು ಸತ್ಯ. ಯೆಸ್ ಮೃತ ಆಂಜನೇಯ 14 ವರ್ಷಗಳ ಹಿಂದೆ ಅನಿತಾ ಎಂಬಾಕೆಯನ್ನು ಕುಟುಂಬಸ್ಥರ ಸಮ್ಮುಖದಲ್ಲಿ ವರಿಸಿದ್ದ. ನಂದಿನಿ ಲೇಔಟ್ನ ಸಂಜಯ್ ಗಾಂಧಿನಗರದ ಸ್ಲಂನಲ್ಲಿ ವಾಸವಾಗಿದ್ದ. ಮದುವೆಗೆ ಸಾಕ್ಷಿಯೆಂಬತೆ ಇಬ್ಬರು ಮುದ್ದಾದ ಮಕ್ಕಳು ಸಹ ಇದ್ರೂ. ಆದರೆ ಆಂಜನೇಯ ಕುಡಿತಕ್ಕೆ ದಾಸನಾಗಿದ್ದ. ಇದೇ ಕಾರಣಕ್ಕೆ ಹೆಂಡತಿ ಅನಿತಾ ದಾರಿ ತಪ್ಪಿಬಿಟ್ಟಿದ್ದಳು.