ಆ ಊರಲ್ಲಿ ವರ್ಷಕ್ಕೊಮ್ಮೆ ದೇವಾಲಯದ ಬಾಗಿಲು ತೆರೆದು ಉತ್ಸವ ಮಾಡುವ ಪದ್ಧತಿಯಿದೆ. ಹೀಗೆ ದೇವಾಲಯದ ಬಾಗಿಲು ತೆಗೆದಾಗ ವಿಶೇಷ ಜಾತ್ರೆ ನಡೆಯುತ್ತಿರುವಾಗಲೇ ಪಂಚಾಯಿತಿ ಸದಸ್ಯನೊಬ್ಬ ಭೀಕರವಾಗಿ ಕೊಲೆಯಾಗಿಹೋಗಿದ್ದಾನೆ.ಹಳೇ ದ್ವೇಷ ಹಿನ್ನೆಲೆ, ಉತ್ಸವದಲ್ಲಿ ಗಲಾಟೆ ತೆಗೆದು ಗ್ರಾಪಂ ಸದಸ್ಯನ ಭೀಕರ ಹತ್ಯೆ ಮಾಡಲಾಗಿದ್ದು, ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಿಮ್ಮೇಗೌಡ(50) ಕೊಲೆಯಾದ ಗ್ರಾ.ಪಂ ಸದಸ್ಯನಾಗಿದ್ದಾನೆ. ಗ್ರಾಮದೇವತೆ ದೇವೀರಮ್ಮ ಉತ್ಸವದ ವೇಳೆ ಘಟನೆ