ತುಮಕೂರು ನಮಗೇ ಇರಲಿ ಎಂದ ಪರಂ

ತುಮಕೂರು, ಸೋಮವಾರ, 18 ಮಾರ್ಚ್ 2019 (13:22 IST)

ತುಮಕೂರು ಲೋಕಸಭಾ ಕ್ಷೇತ್ರದ ಬಗ್ಗೆ ಜೆಡಿಎಸ್ ಗೆ ಬಿಟ್ಟು ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪರಮೇಶ್ವರ್ ಖಡಕ್ ಹೇಳಿಕೆ
ನೀಡಿದ್ದಾರೆ.

ನಮ್ಮ ವರಿಷ್ಠರ ಗಮನಕ್ಕೆ ಈ ಬೆಳವಣಿಗೆ ಬಗ್ಗೆ ತಂದಿದ್ದಿನಿ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮುದ್ದು ಹನುಮೇಗೌಡ ಗೆದ್ದಿದ್ರು. ಕಾಂಗ್ರೆಸ್ 10 ಕ್ಷೇತ್ರಗಳಲ್ಲಿ ಅಭ್ಯರ್ಥಿ ಗೆದ್ದಿದ್ರು. ಗೆದ್ದ ಅಭ್ಯರ್ಥಿಗಳ ಬದಲಾವಣೆ ಬೇಡ ಅಂತ ಮೈತ್ರಿ ಆಗಿತ್ತು. ನಾವು ಮಂಡ್ಯ ,ಹಾಸನ‌ ಕೇಳೋದು ಬೇಡ ಅಂತ ಆಗಿತ್ತು. ಈ ಸಂಬಂಧ ಸ್ಕ್ರಿನಿಂಗ್ ಕಮಿಟಿಯಲ್ಲೂ ಚರ್ಚೆ ಆಗಿತ್ತು.

ಆದ್ರೆ ಅಂತಿಮವಾಗಿ ತುಮಕೂರು ಕ್ಷೇತ್ರ ಜೆಡಿಎಸ್ ಗೆ ಕೊಟ್ಡಿದು ಬೇಸರ ತಂದಿದೆ ಎಂದ್ರು.

ಜೆಡಿಎಸ್ ನಾಯಕರೊಂದಿಗೆ ಮಾತನಾಡಿ ಕ್ಷೇತ್ರ ಬಿಟ್ಟು ಕೊಡುವಂತೆ ಮನವಿ ಮಾಡಲಾಗಿದೆ. ನನಗೆ ಈಗಲೂ ವಿಶ್ವಾಸವಿದೆ ತುಮಕೂರು ಕಾಂಗ್ರೆಸ್ ಗೆ ಬಿಟ್ಟು ಕೊಡ್ತಾರೆ ಎಂಬ ನಂಬಿಕೆ ಇದೆ ಎಂದ್ರು.

ಸೈನಿಕರ ಹೋರಾಟವನ್ನ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಬೆಳವಣಿಗೆಯನ್ನ ಮನದಲ್ಲಿರಿಸಿಕೊಳ್ಳಬೇಕಿದೆ.
ದೇಶದ ಒಳಿತಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ತುಮಕೂರಿನಲ್ಲಿ ದೇವೇಗೌಡರು ನಿಲ್ಲುವುದಾದ್ರೆ ಸ್ವಾಗತ.  
ಆದ್ರೆ ಬೇರೆಯವರು ನಿಲ್ಲೊದಾದ್ರೆ ಕಾಂಗ್ರೆಸ್ ಗೆ ಬಿಟ್ಟು ಕೊಡಿ ಅಂತ ಹೇಳಿದ್ರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹೆಚ್ಡಿಡಿ ಹಾಸನದಿಂದಲೇ ಸ್ಪರ್ಧಿಸಲಿ ಎಂದ ರೇವಣ್ಣ

ಮಹತ್ವದ ಬೆಳವಣಿಗೆಯೊಂದರಲ್ಲಿ ಹಾಸನದಿಂದ ದೇವೇಗೌಡ್ರೇ ಸ್ಪರ್ಧೆ ಮಾಡಬೇಕೆಂದು ಸಚಿವ ರೇವಣ್ಣ ...

news

ಇಂದು ಸಂಜೆ 5 ಗಂಟೆಗೆ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅಂತ್ಯಸಂಸ್ಕಾರ

ಗೋವಾ : ಭಾನುವಾರ ನಿಧನರಾದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಅಂತ್ಯಸಂಸ್ಕಾರ ಇಂದು ಸಂಜೆ 5 ಗಂಟೆಗೆ ...

news

ನರೇಂದ್ರ ಮೋದಿ ಪ್ರಧಾನಿಯಾಗಿದ್ದರ ಹಿಂದಿದೆ ಮನೋಹರ್ ಪರಿಕ್ಕರ್ ಟ್ರಿಕ್! ಏನದು ಗೊತ್ತಾ?

ನವದೆಹಲಿ: 2014 ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಹೆಸರು ...

news

ಸತ್ತವರಿಗಾಗಿ ಹೋಟೆಲ್ ಓಪನ್ ಮಾಡಿದ ವ್ಯಕ್ತಿ. ಕಾರಣವೇನು ಗೊತ್ತಾ?

ಜಪಾನ್ : ಹೊಸದಾಗಿ ಮದುವೆಯಾದ ದಂಪತಿಗಳಿಗಾಗಿ, ಪ್ರಯಾಣಿಕರಿಗಾಗಿ ತ್ರೀ ಸ್ಟಾರ್, ಫೈವ್ ಸ್ಟಾರ್, ಐಶಾರಾಮಿ ...