ಬೆಂಗಳೂರು-ನಿನ್ನೆ ಸಿಎಂ ನಿವಾಸದಲ್ಲಿ ಸಭೆ ವಿಚಾರವಾಗಿ ಗೃಹಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಊಟಕ್ಕೂ ಸೇರಬಾರದಾ.?ಸಿಎಂ ನಿನ್ನೆ ರಾತ್ರಿ ಎಲ್ಲಾ ಸಚಿವರನ್ನ ಊಟಕ್ಕೆ ಕರೆದಿದ್ರು.ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆಗೆ ತಯಾರಿ ಬಗ್ಗೆ ಚರ್ಚೆ ಮಾಡಿದೆವು.ಅಧ್ಯಕ್ಷರು ಹಲವು ಸೂಚನೆ ನೀಡಿದ್ರು.ಕ್ಯಾಂಡಿಡೇಟ್ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.ಇನ್ನೂ ಪ್ರಕಾಶ್ ಹುಕ್ಕೇರಿ ನಾನು ಫುಟ್ಬಾಲಾ ಅನ್ನೋ ಹೇಳೀಕೆ ವಿಚಾರವಾಗಿ ಈ ಬಗ್ಗೆ ಕಾಮೆಂಟ್ ಮಾಡಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.ಸಂಸದ ಡಿಕೆ ಸುರೇಶ್ ದೇಶ ವಿಭಜನೆ ಹೇಳಿಕೆ ವಿಚಾರವಾಗಿ ಸುರೇಶ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ.ಈ ದೇಶ ಒಗ್ಗೂಡಿಸಲು ಲಕ್ಷಾಂತರ ಜನ ಜೀವ ಕಳೆದುಕೊಂಡಿದ್ದಾರೆ.ಗಾಂಧೀಜಿ ಸೇರಿದಂತೆ ಹಲವರು ದೇಶ ಒಗ್ಗೂಡಿಸಲು ಮುಂದಾದ್ರು.