ಕೋಲಾರ : ಕರ್ನಾಟಕದಲ್ಲಿ ಬಹುಮತದಿಂದ ಕಾಂಗ್ರೆಸ್ ಗದ್ದುಗೆ ಏರಿದ್ದು, ಸಿಎಂ ಸ್ಥಾನಕ್ಕೆ ಈಗ ಪೈಪೋಟಿ ಶುರುವಾಗಿದೆ. ಒಂದೆಡೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ರೇಸ್ನಲ್ಲಿ ಇದ್ದರೆ, ಇದೀಗ ಜಿ. ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದ್ದಾರೆ.