ರಾಜ್ಯದ ಮೈತ್ರಿ ನಾಲ್ಕು ವರ್ಷ ಮುಂದುವರಿಯಬೇಕಿದೆ. ಹೀಗಾಗಿ ಇಂತಹ ಹೇಳಿಕೆ ಮುಂದುವರಿಯಬಾರದು ಅಂತ ಡಿಸಿಎಂ ಹೇಳಿದ್ದಾರೆ.ನಮ್ಮಲ್ಲೂ ಇಂತಹ ಹೇಳಿಕೆ ನೀಡುವುದು ತಪ್ಪು. ಸಿಎಂ, ಸರ್ಕಾರದ ವಿರುದ್ಧ ಹೇಳಿಕೆ ಕೊಡುವುದಿದ್ದರೆ ನಿಲ್ಲಿಸಬೇಕು. ಅಂತರಿಕ ಭಿನ್ನಾಭಿಪ್ರಾಯವಿದ್ದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ನಮ್ಮ ಪ್ರಧಾನ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಬಹುದು ಅಂತ ಜೆಡಿಎಸ್ ನಾಯಕರಿಗೆ ಡಿಸಿಎಂ ಪರಮೇಶ್ವರ್ ಸಲಹೆ ನೀಡಿದ್ದಾರೆ.ವಿಶ್ವನಾಥ್ ಜನತಾದಳದ ಅಧ್ಯಕ್ಷರು. ಅವರಿಗೆ ಹಾಗೂ ಸಿದ್ದರಾಮಯ್ಯಗೆ ವಯಕ್ತಿಕ ವ್ಯತ್ಯಾಸ ಇರಬಹುದು. ರಾಜಕೀಯವಾಗಿ ನಾವು