ಪ್ರೀತಿಸಿ ಮದುವೆಯಾದ ದಂಪತಿಯನ್ನು ಬೇರ್ಪಡಿಸಲು ಪೋಷಕರ ಯತ್ನ..!

ಚಿತ್ರದುರ್ಗ| Jagadeesh| Last Modified ಬುಧವಾರ, 26 ಸೆಪ್ಟಂಬರ್ 2018 (14:27 IST)
ಯುವತಿಗೆ ವಾಮಾಚಾರ ಮಾಡಿಸಿ ಮತ್ತೊಬ್ಬನೊಂದಿಗೆ ಮರು ಮದುವೆಯನ್ನು ಕುಟುಂಬಸ್ಥರು, ಸಂಬಂಧಿಗಳು ಸೇರಿ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯುವತಿಯ ಮೈ, ಕೈಗೆ ಬೆಂಕಿಯಿಂದ ಬರೆ ಹಾಕಿ ಹಲ್ಲೆ ನಡೆಸಿರೋ ಆರೋಪ ಕೇಳಿಬಂದಿದೆ. ಯುವತಿ ಮಾನಸಾಳ ಸಂಬಂಧಿ ಮನೋಜ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೋಸದಿಂದ ಮರು ಮದುವೆ ಮಾಡಿಸಿ

ಯುವತಿ ಯನ್ನು ಧರ್ಮಸ್ಥಳಕ್ಕೆ ಪೋಷಕರು ಕರೆದೊಯ್ದಿದ್ದರು. ಆದರೆ ಪೋಷಕರಿಂದ

ತಪ್ಪಿಸಿಕೊಂಡು ಬಂದ ಯುವತಿ ಮಾನಸಾ, ಚಿತ್ರದುರ್ಗದಲ್ಲಿರೋ ಗಂಡನನ್ನು ಸೇರಿದ್ದಾಳೆ.

ಘಟನೆ ಇದಿಷ್ಟು:
ಬಳ್ಳಾರಿ ಜಿಲ್ಲೆಯ ಹಿರೇ ಕುಂಬಳಗುಂಟೆ ಬಸವರಾಜಪ್ಪ, ಮಂಗಳಮ್ಮ ದಂಪತಿಯ ಪುತ್ರಿ ಮಾನಸ ಮತ್ತು
ವಿಜಯಕುಮಾರ್ ಕಳೆದ ಎರಡು ವರ್ಷಗಳಿಂದ

ಪ್ರೀತಿಸುತಿದ್ರು. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಚಿತ್ರದುರ್ಗದಲ್ಲಿ ವಿವಾಹವಾಗಿದ್ದರು. ಆದರೆ ವಾಮಾಚಾರದ ಮೂಲಕ ಸೋದರ ಅಳಿಯ ರಾಘವೇಂದ್ರನೊಂದಿಗೆ ಮಾನಸಾಳ ಮರು ಮದುವೆಯನ್ನು ಆಕೆಯ ಪೋಷಕರು ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೀಗಾಗಿ ಪ್ರಾಣಭಯದಲ್ಲಿರೋ ಪ್ರೇಮಿಗಳಿಂದ ರಕ್ಷಣೆಗಾಗಿ ಚಿತ್ರದುರ್ಗದಲ್ಲಿ ಪರದಾಟ ನಡೆದಿದೆ.
ಇದರಲ್ಲಿ ಇನ್ನಷ್ಟು ಓದಿ :