ಮಳೆ ಅನಾಹುತ ಸೇರಿದಂತೆ ಮಹಾನಗರದ ನಾಗರಿಕರ ಕುಂದು-ಕೊರತೆ ನಿವಾರಿಸಿ ಸಕಾಲಕ್ಕೆ ಸೌಲಭ್ಯ ಕಲ್ಪಿಸಲು ಕೇಂದ್ರೀಕೃತ ಪ್ರಾಧಿಕಾರ ರಚನೆ ಅಗತ್ಯವಾಗಿದೆ. ಹೀಗಂತ ನೂತನ ಬಿಜೆಪಿ ಸಂಸದ ಹೇಳಿದ್ದಾರೆ.ನೂತನ ಸಂಸದ ಡಿ.ವಿ ಸದಾನಂದಗೌಡ ಸರಣಿ ಟ್ವೀಟ್ ಮೂಲಕ ಈ ವಿಷ್ಯ ಪ್ರತಿಪಾದಿಸಿದ್ದಾರೆ.ಬೆಂಗಳೂರಿನ ನಾಗರಿಕ ಸೌಲಭ್ಯಗಳ ಕುಂದು ಕೊರತೆಯನ್ನು ಹದ್ದು ಬಸ್ತಿನಲ್ಲಿಡಲು, ಬೆಳೆಯುತ್ತಿರುವ ನಮ್ಮ ನಗರ ಬೆಂಗಳೂರಿನ ನಾಗರಿಕರಿಗೆ ಕ್ಲಪ್ತ ಸಮಯದಲ್ಲಿ ಬೇಕಾದ ಸೌಲಭ್ಯಗಳನ್ನು ಜಾರಿಗೊಳಿಸಲು ಕೇಂದ್ರೀಕೃತ ಪ್ರಾಧಿಕಾರವೊಂದರ ರಚನೆ ಅತ್ಯಂತ ಪ್ರಸ್ತುತ ಮತ್ತು