ಬೆಂಗಳೂರು: ಮೆಟ್ರೋ ರೈಲು ಬೆಂಗಳೂರಿನಲ್ಲಿ ಓಡಾಡಲು ಪ್ರಾರಂಭಿಸಿದ ಮೇಲೆ ನಮ್ಮ ರಾಜಧಾನಿಗೊಂದು ಗರಿಮೆ ಎಂದು ಹೆಮ್ಮೆಪಟ್ಟುಕೊಂಡಿದ್ದೆವು. ಇದೀಗ ಪ್ರಯಾಣಿಕರನ್ನು ಸೆಳೆಯಲು ಮೆಟ್ರೋ ಕೈಗೊಂಡ ನಿರ್ಧಾರವೊಂದು ಸಂಕಟ ತಂದಿದೆ.ಬಿಎಂಆರ್ ಸಿ ಏನೋ ಪ್ರಯಾಣಿಕರನ್ನು ಸೆಳೆಯಲು ಮಧ್ಯರಾತ್ರಿವರೆಗೆ ಮೆಟ್ರೋ ಸೇವೆ ಮುಂದುವರಿಸಿದೆ. ಆದರೆ ಈ ಸಂದರ್ಭದಲ್ಲಿ ಸಭ್ಯ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಲೂ ಭಯಪಡುವಂತಾಗಿದೆ.ಕಾರಣ, ಕುಡುಕರ ಹಾವಳಿ. ತಡರಾತ್ರಿಯಲ್ಲಿ ರೈಲು ಹತ್ತುವ ಕುಡುಕರು ರೈಲಿನೊಳಗೆ ಉಗಿಯುವುದು, ವಾಂತಿ ಮಾಡುವುದು, ಅಸಭ್ಯವಾಗಿ ವರ್ತಿಸುವುದು, ಹುಡುಗಿಯರನ್ನು ಚುಡಾಯಿಸುವುದು