ರೋಗಿಯೊಬ್ಬನನ್ನು ಆಂಬುಲೆನ್ಸ್ ಸಿಗದೇ ಗೂಡ್ಸ್ ಆಟೋದಲ್ಲಿ ಸಾಗಿಸಿರುವ ಅಮಾನವೀಯ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ರೈತನೊಬ್ಬ ತೆಂಗಿನಮರದಿಂದ ಬಿದ್ದು ಗಾಯಗೊಂಡಿದ್ದ. ಆತನನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲು 108 ಆಂಬುಲೆನ್ಸ್ ಗೆ ಫೋನ್ ಮಾಡಿದ್ರೆ ಮದ್ದೂರಿನಿಂದ 15 ಕಿಲೋ ಮೀಟರ್ ಇರುವ ಮಂಡ್ಯ ಗೆ ಕರೆತರಲು ಆಂಬುಲೆನ್ಸ್ ಚಾಲಕ ಒಂದೂವರೆ ಸಾವಿರ ಹಣ ಕೇಳಿದ್ದಾನೆ.ಬಡ ರೈತ ಕುಟುಂಬ ಅಷ್ಟು ಹಣ ಕೊಡಲಾಗದೇ