ಸಂತೆಯಲ್ಲಿ ಸಾಮಗ್ರಿ ಕೊಳ್ಳೋಕೆ ಮುಗಿಬಿದ್ದೋರಿಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಗ್ರಾಮೀಣ ಭಾಗದ ಅಂಗಡಿಗಳಲ್ಲಿ ತರಕಾರಿ ಸಾಮಾಗ್ರಿಗಳಿಗೆ ಕೊರತೆಯಾಗಬಾರದೆಂಬ ದಿಸೆಯಲ್ಲಿ ಉಡುಪಿಯ ಕುಂದಾಪುರದ ಶನಿವಾರದ ಸಂತೆಯಲ್ಲಿ ಕೇವಲ ಅಂಗಡಿ ವ್ಯಾಪಾರಸ್ಥರಿಗೆ ಖರೀದಿಸಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು.ಉಳಿದಂತೆ ಸಾರ್ವಜನಿಕರಿಗೆ ಪ್ರವೇಶಾನುಮತಿ ನಿರಾಕರಿಸಲಾಗಿತ್ತು. ಆದ್ರೆ ಸಂತೆಯಲ್ಲಿ ಸಾರ್ವಜನಿಕರು ಸಾಮಗ್ರಿಗಳನ್ನ ಖರೀದಿಸಲು ಮುಗಿಬಿದ್ದ ದೃಶ್ಯ ಕಂಡು ಬಂದಿದ್ದು, ಪರಿಣಾಮ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. ಲಾಕ್ಡೌನ್ ಹಿನ್ನೆಲೆ ಸಾಮಾಜಿಕ