ಬಿಜೆಪಿಯ ಪೊಳ್ಳು ಮಾಹಿತಿಗೆ ಜನ ತಲೆಕೆಡಿಸಿಕೊಳ್ಳಲ್ಲ: ಯು.ಟಿ.ಖಾದರ್

ಬೆಂಗಳೂರು| Kusuma| Last Modified ಸೋಮವಾರ, 9 ಅಕ್ಟೋಬರ್ 2017 (16:18 IST)
ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಬಿಜೆಪಿಗೆ ಅನಾವಶ್ಯಕ ವಿಚಾರಗಳು ತಲೆಗೆ ಬರುತ್ತವೆ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಯು.ಟಿ‌.ಖಾದರ್, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಉತ್ತಮವಾಗಿದೆ. ಕೇರಳ ರೀತಿಯಲ್ಲಿ‌ ಬಿಜೆಪಿ ವತಿಯಿಂದ ಜನ ರಕ್ಷಾಯಾತ್ರೆ ಮಾಡುವ ಮೂಲಕ ಅದ‌ನ್ನು ಕೆಡಿಸುವ ಕೆಲಸ ಬಿಜೆಪಿ ಮಾಡಲು ಹೊರಟಿದೆ. ಆದ್ರೆ ರಾಜ್ಯದ ಜನ ಬುದ್ಧಿವಂತರಿದ್ದಾರೆ. ಬಿಜೆಪಿಯ ಪೊಳ್ಳು ಮಾಹಿತಿಗೆ ಜನ ತಲೆಕೆಡಿಸಿಕೊಳ್ಳುವವರಲ್ಲ ಎಂದು ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :