ಕೊಡಗಿನಲ್ಲಿ ಹುಲಿ ಹಾವಳಿ ಮುಂದುವರೆದಿದೆ. ಹಾಡು ಹಗಲೇ ಗ್ರಾಮಕ್ಕೆ ಬಂದ ಹುಲಿಯೊಂದು ಹಸುವನ್ನು ಬೇಟೆಯಾಡಿದೆ. ಈ ಘಟನೆಯಿಂದ ಅಲ್ಲಿನ ಜನರು ಬೆಚ್ಚಿ ಬಿದ್ದಿದ್ದಾರೆ. ಹುಲಿ ಹಸುವನ್ನು ಬಲಿ ತೆಗೆದುಕೊಂಡು ಪರಾರಿಯಾದ ಘಟನೆ ಅವರೆಗುಂದ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲ್ಲೂಕಿನ ಅವರೆಗುಂದ ಗ್ರಾಮದಲ್ಲಿ ಘಟನೆ ನಡೆದಿದೆ. ಅವರೇಗುಂದ ನಿವಾಸಿ ವೈ.ಕೆ ಮಾದ ಎಂಬವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟ ಸಂದರ್ಭ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಜೊತೆಯಲ್ಲಿ ಇದ್ದ ಮತ್ತೊಂದು ಹಸು ಪ್ರಾಣಾಪಯದಿಂದ ಪಾರಾಗಿ