ಅನ್ ಲಾಕ್ ಸುದ್ದಿ ಕೇಳಿಯೇ ಬೀದಿಗಿಳಿದ ಜನ

ಬೆಂಗಳೂರು| Krishnaveni K| Last Modified ಶನಿವಾರ, 12 ಜೂನ್ 2021 (09:11 IST)
ಬೆಂಗಳೂರು: ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದ್ದೇ ತಡ, ಜನ ರಸ್ತೆಗಿಳಿಯಲು ಪ್ರಾರಂಭಿಸಿದ್ದಾರೆ.  
> ಈಗ ಲಾಕ್ ಡೌನ್ ಜಾರಿಯಲ್ಲಿದೆ. ಹಾಗಿದ್ದರೂ ಕಳೆದ ಕೆಲವು ದಿನಗಳಿಂದ ಮನೆಯೊಳಗೇ ಕೂತು ಬೇಸತ್ತಿರುವ ಜನ ಅನ್ ಲಾಕ್ ಎಂಬ ಸುದ್ದಿ ಕೇಳಿಯೇ ಗುಂಪು ಗುಂಪಾಗಿ, ವಾಹನಗಳ ಸಮೇತ ಬೀದಿಗಿಳಿದಿದ್ದಾರೆ. ಬೆಂಗಳೂರಿನ ಹಲವೆಡೆ ಈಗಲೇ ಟ್ರಾಫಿಕ್ ಜಾಮ್ ಆಗುತ್ತಿದೆ.>   ಈಗಲೇ ಹೀಗಾದರೆ, ಅನ್ ಲಾಕ್ ಆದ ಮೇಲೆ ಜನ ಯಾವ ರೀತಿ ನಡೆದುಕೊಳ್ಳಬಹುದು ಎಂದು ಊಹಿಸಿಕೊಳ್ಳಿ. ಈ ರೀತಿಯಾದರೆ ಕೊರೋನಾ ಪ್ರಕರಣಗಳು ಮತ್ತೆ ಹೆಚ್ಚಿ ಮತ್ತೆ ಲಾಕ್ ಡೌನ್ ಮಾಡಬೇಕಾದ ಪರಿಸ್ಥಿತಿ ಬರಬಹುದು. ಹೀಗಾಗಿ ಅನ್ ಲಾಕ್ ಆದರೂ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿ ನಿಮ್ಮ ಎಚ್ಚರದಲ್ಲಿ ನೀವಿರುವುದು ಉತ್ತಮ.ಇದರಲ್ಲಿ ಇನ್ನಷ್ಟು ಓದಿ :