ಎಣ್ಣೆ ತುಂಬಿದ ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಲಾರಿ ಡಿಕ್ಕಿಯಾದ ಪರಿಣಾಮ, ಅಪಘಾತದಲ್ಲಿ ಲಾರಿ ಚಾಲಕನನ್ನ ರಕ್ಷಿಸಿ ಆಸ್ಪತ್ರೆಗೆ ಸಾಗಿಸಲು ಮುಂದಾಗದ ಜನ ಮಾನವೀಯತೆ ಮರೆತು ಕ್ಯಾಂಟರ್ ನಲ್ಲಿ ಸೋರುತ್ತಿದ್ದ ಎಣ್ಣೆಗಾಗಿ ಮುಗಿಬಿದ್ದ ಘಟನೆ ನಡೆದಿದೆ.ಲಾರಿ ಚಾಲಕನ ಸಾವಿಗೆ ಕಾರಣವಾದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದೆ. ಇಳಕಲ್ ನಗರದ ಮುದಗಲ್ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಅಡುಗೆ ಎಣ್ಣೆ