ಕಳೆದ ಒಂದು ತಿಂಗಳಿಂದ ಆ ಜಿಲ್ಲೆಯಲ್ಲಿ ಸುರಿದ ವ್ಯಾಪಕ ಮಳೆ ಭಾರೀ ಅನಾಹುತವನ್ನೇ ಸೃಷ್ಠಿಸಿದೆ. ಇದರ ಪರಿಣಾಮವನ್ನು ಇಂದಿಗೂ ಮಲೆನಾಡಿನ ಜನರು ಅನುಭವಿಸುತ್ತಿದ್ದಾರೆ. ಬರೋಬ್ಬರಿ 736 ಗ್ರಾಮಗಳು ಕಗ್ಗತ್ತಲ್ಲಿ ಮುಳುಗಿವೆ. ಎಲ್ಲೆಡೆ ಸಂಪೂರ್ಣ ಸಂಪರ್ಕವೇ ಕಳೆದುಹೋದಂತಾಗಿದೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ 88 ಕೋಟಿಗೂ ಅಧಿಕ ಆಸ್ತಿ-ಪಾಸ್ತಿ ಮಳೆಯಿಂದ ಇದುವರೆಗೂ ನಷ್ಟವಾಗಿದೆ. ಇದರಲ್ಲಿ ಮೆಸ್ಕಾಂಗೆ ಅತಿಹೆಚ್ಚು ಹಾನಿಯುಂಟಾಗಿದೆ. ದಶಕದ ನಂತರ ಮತ್ತೆ ಮಲೆನಾಡಿನಲ್ಲಿ ಮಳೆ ಆರ್ಭಟಿಸಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಅತಿವೃಷ್ಟಿಯನ್ನೇ ಸೃಷ್ಠಿಸಿದೆ.