ಮಲೆನಾಡು ಪ್ರದೇಶಗಳಲ್ಲಿ ಭೀಕರ ಪ್ರವಾಹ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತರ ನೆರವಿಗಾಗಿ ಗಡಿನಾಡಲ್ಲಿ ದೇಣಿಗೆ ಸಂಗ್ರಹ ಮಾಡಲಾಯಿತು.ಗಡಿ ಜಿಲ್ಲೆ ಬೆಳಗಾವಿಯ ಚಿಕ್ಕೋಡಿಯಲ್ಲಿ ಶ್ರಿ ಅಲ್ಲಮಪ್ರಭು ಅನ್ನದಾನ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸಲಾಯಿತು. ಕಳೆದ ಹಲವು ದಿನಗಳಿಂದ ಕೊಡಗು ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಭಾರಿ ಪ್ರಮಾಣ ಮಳೆ ಹಾಗೂ ಪ್ರವಾಹಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದೆ.ಇದರಿಂದ ಅಲ್ಲಿಯ ಸ್ಥಳೀಯರು ಮನೆ- ಮಠಗಳನ್ನು ಕಳೆದು ಅನಾಥರಾಗಿದ್ದಾರೆ. ಸರ್ಕಾರ