ಬೆಂಗಳೂರು: ನಿನ್ನೆ ಆಕಾಶದಲ್ಲಿ ನಡೆದ ಕೌತುಕ ವಿದ್ಯಮಾನ ನೋಡಲು ನೆಹರೂ ತಾರಾಲಯದಲ್ಲಿ ಸೇರಿದ್ದ ಜನ ಗಲಾಟೆಗಿಳಿದಿದ್ದರು. ಸಾವಿರಾರು ಜನ ರಕ್ತ ಚಂದ್ರ ಗ್ರಹಣ ನೋಡಲು ತಾರಾಲಯದ ಬಳಿ ಜಮಾಯಿಸಿದ್ದರು. ಇವರಿಗಾಗಿ ಬೈನಾಕ್ಯುಲರ್ ಮತ್ತು ಟೆಲಿಸ್ಕೋಪ್ ಗಳ ವ್ಯವಸ್ಥೆ ಮಾಡಲಾಗಿತ್ತು. ಹಾಗಿದ್ದರೂ ಪರಿಸ್ಥಿತಿ ನಿಭಾಯಿಸಲು ಪೊಲೀಸ್ ಸಿಬ್ಬಂದಿಗಳಿಲ್ಲದೇ ಗಲಭೆ ಏರ್ಪಟ್ಟಿದೆ.ನೂಕು ನುಗ್ಗಲಿನ ನಡುವೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು. ಸಾವಿರಾರು ಜನ ಬರುವ ನಿರೀಕ್ಷೆಯಿದ್ದರೂ ತಾರಾಲಯ ಸಿಬ್ಬಂದಿ