ಚಿಂತಾಮಣಿ: ಲಾಕ್ ಡೌನ್ ಹಿನ್ನೆಲೆ ಈಗ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬೀಳುತ್ತಿದ್ದಾರೆ. ಹಾಲು, ದಿನಸಿ ವಸ್ತುಗಳ ಖರೀದಿಗಾಗಿ ಜನ ಲಾಕ್ ಡೌನ್ ಉಲ್ಲಂಘಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಜನಜಂಗುಳಿ ಉಂಟಾಗಿದೆ.