ಮನೆ ತೆರಿಗೆ ಹೆಚ್ಚಿಗೆ ಮಾಡದಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ತೆರಿಗೆಯಲ್ಲಿ ಭಾರೀ ವ್ಯತ್ಯಾಸವಾಗಿದ್ದು, ಮನೆ ತೆರಿಗೆ ಹೆಚ್ಚು ಮಾಡದಂತೆ ಸಾರ್ವಜನಿಕರು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆಯನ್ನು ಮಾಡಿದರು. ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಸತೀಶ್ ಕುಮಾರ್, ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ತೆರಿಗೆಯನ್ನು ಹೆಚ್ಚು ಮಾಡಲು ತಮ್ಮ ತೀವ್ರ ವಿರೋಧವಿದೆ. ಈ ಭಾಗದಲ್ಲಿ ವಾಸಿಸುವವರು ಹೆಚ್ಚಾಗಿ