ಕಂಟೇನ್ ಮೆಂಟ್ ಜೋನ್ ನಲ್ಲಿ ಜನರ ನಿರ್ಲಕ್ಷ್ಯ; ಕೊರೊನಾ ಭೀತಿ ನಡುವೆಯೂ ಓಡಾಟ

ಬೆಂಗಳೂರು| pavithra| Last Modified ಮಂಗಳವಾರ, 26 ಮೇ 2020 (08:56 IST)
ಬೆಂಗಳೂರು : ಕೊರೊನಾ ಸೋಂಕಿನ ಭೀತಿ ಇದ್ದರೂ ಕೂಡ ಕಂಟೇನ್ ಮೆಂಟ್ ಜೋನ್ ನಲ್ಲಿ ಜನರ  ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನಲಾಗಿದೆ.


ಬೆಂಗಳೂರಿನ ಶಿವಾಜಿನಗರದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಕೂಡ ಜನರು ಲಾಕ್ ಡೌನ್ ಉಲ್ಲಂಘಿಸಿ ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಬ್ಯಾರಿಕೇಡ್ ಗಳನ್ನು ಪಕ್ಕಕ್ಕೆ ಸರಿಸಿ ಜನರು ತಿರುಗಾಡುತ್ತಿದ್ದಾರೆ.


ಪೊಲೀಸರು ಎಷ್ಟೇ ಬುದ್ಧಿವಾದ ಹೇಳಿದರೂ ಕೇಳದ ಜನರು ಸೋಂಕಿನ ಭಯವಿಲ್ಲದೆ ಓಡಾಡುತ್ತಿದ್ದಾರೆ. ಇದರಿಂದಾಗಿ ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ಪೊಲೀಸರು ಪರದಾಡುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :