ರೈಲಿನಲ್ಲಿ ಬರುವ ಪಾರ್ಸೆಲ್ಗಳನ್ನು ಕೆಲಸಗಾರರು ಬೀಸಾಡುವ ವಿಡಿಯೋವೊಂದು ಇತ್ತೀಚೆಗಷ್ಟೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ವೀಡಿಯೋ ಕುರಿತಂತೆ ಈಶಾನ್ಯ ಫ್ರಾಂಟಿಯರ್ ರೈಲ್ವೆ ಸ್ಪಷ್ಟನೆ ನೀಡಿದೆ. ಗುವಾಹಟಿ ನಿಲ್ದಾಣದಲ್ಲಿ ರೈಲ್ವೆ ನಿಲ್ದಾಣಕ್ಕೆ ರೈಲಿನಲ್ಲಿ ಬಂದ ರಾಶಿಗಟ್ಟಲೆ ಪಾರ್ಸೆಲ್ಗಳನ್ನು ಕೆಳಗಿಳಿಸುವಾಗ ಕೆಲಸಗಾರರು ಬೇಜವಾಬ್ದಾರಿಯಿಂದ ಇಷ್ಟಬಂದಂತೆ ಬೀಸಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಟ್ವೀಟ್ ಮಾಡುವ ಮೂಲಕ ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನವದೆಹಲಿ ದಿಬ್ರುಗಢ