ಹುಬ್ಬಳ್ಳಿ : ಸಂಭಾವ್ಯ ಕೊರೊನಾ 3ನೇ ಅಲೆ ಭೀತಿ ಹಾಗೂ ಓಮಿಕ್ರಾನ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಡಿಸೆಂಬರ್ 28 ರಿಂದ ರಾಜ್ಯ ಸರಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದೆ.ಆದರೆ, ನೈಟ್ ಕರ್ಫ್ಯೂನಿಂದಾಗಿ ಚೇತರಿಕೆ ಕಾಣುತ್ತಿರುವ ಉದ್ಯಮಕ್ಕೆ ಹೊಡೆತ ಬೀಳಲಿದೆ ಎಂಬ ಆತಂಕ ಎದುರಾಗಿದ್ದು, ನಾನಾ ಉದ್ಯಮ ಕ್ಷೇತ್ರದಿಂದ ವಿರೋಧದ ಮಾತುಗಳು ಕೇಳಿ ಬರುತ್ತಿವೆ.ಕೋವಿಡ್ ಲಾಕ್ಡೌನ್ನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಉದ್ಯಮ ಕ್ಷೇತ್ರ, ಇತ್ತೀಚೆಗೆ ಆರ್ಥಿಕ ಚೇತರಿಕೆ ಕಂಡುಕೊಳ್ಳುತ್ತಿದೆ.ಈಗ ಮತ್ತೆ