ಸಚಿವರಿಗೆ, ಶಾಸಕರಿಗೆ ದಿಗ್ಭಂಧನ ಹಾಕೋದನ್ನು ಕೇಳಿದ್ದೇವೆ. ನೋಡಿದ್ದೇವೆ. ಆದರೆ ಈ ಊರಲ್ಲಿ ಜನರು ದೇವರಿಗೆ ದಿಗ್ಭಂಧನ ಹಾಕಿದ್ದಾರೆ.ಮಳೆಗಾಗಿ ದೇವರಿಗೆ ಜಲ ದಿಗ್ಭಂಧನ ಹಾಕಿದ ಗ್ರಾಮಸ್ಥರು ಗಮನ ಸೆಳೆದಿದ್ದಾರೆ. ದೇವರ ಗರ್ಭ ಗುಡಿಯೊಳಗೆ ನೀರು ಹಾಕಿ ದ್ವಾರ ಮುಚ್ಚಿದ್ದಾರೆ ಗ್ರಾಮಸ್ಥರು.ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಅಪರೂಪದ ಘಟನೆ ನಡೆದಿದೆ.ಎಂ ಕೆ ಹುಬ್ಬಳ್ಳಿ ಪಟ್ಟಣದಲ್ಲಿರುವ ಐತಿಹಾಸಿಕ ಪ್ರಸಿದ್ಧ ಸೂರ್ಯನಾರಾಯಣ ದೇವಸ್ಥಾನದಲ್ಲಿ ಘಟನೆ ನಡೆದಿದೆ. ಸೂರ್ಯ ನಾರಾಯಣ ದೇವಸ್ಥಾನದಲ್ಲಿ ನೀರು ತುಂಬಿಸಿ ಬಾಗಿಲು