ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರೋ ಸೋನೆ ಮಳೆ ಹಾಗೂ ರಣಗಾಳಿಗೆ ಅಲ್ಲಲ್ಲೆ ಬೆಟ್ಟ-ಗುಡ್ಡ ಹಾಗೂ ಭೂಮಿ ಕುಸಿಯುತ್ತಿವೆ. ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಎರಡ್ಮೂರು ದಿನದಿಂದ ಮಲೆನಾಡಿನಲ್ಲಿ ಮಳೆಯ ಪ್ರಮಾಣ ತಗ್ಗಿದ್ದು ಗಾಳಿಯ ವೇಗ ಹೆಚ್ಚಾಗಿದೆ.ಎರಡು ತಿಂಗಳ ಕಾಲ ಸುರಿದ ಮಳೆಗೆ ಭೂಮಿಯ ತೇವಾಂಶ ಹೆಚ್ಚಾಗಿದ್ದು ಈಗಿನ ದೈತ್ಯ ಗಾಳಿಯಿಂದ ಭೂಕುಸಿತದ ಪ್ರಕರಣ ಹೆಚ್ಚಾಗಿವೆ. ಎನ್.ಆರ್.ಪುರ ತಾಲೂಕಿನ ಖಾಂಡ್ಯ ಹೋಬಳಿಯ ಬಿದರು, ಮೇಲ್ ಪಲ್ ಗ್ರಾಮದಲ್ಲಿ ಹಳಸೆ ಶಿವಣ್ಣ , ಸತೀಶ್ ಭಟ್