ಕಳೆದ ರಾತ್ರಿ ಸುರಿದ ಭಾರಿ ಮಳೆ ಅಲ್ಲಿನ ಜನರ ನಿದ್ದೆಗೆಡಿಸಿದೆ.ನಿರಂತರವಾಗಿ ಸುರಿದ ಮಳೆ ಗದಗ- ಬೆಟಗೇರಿ ಜನರ ನಿದ್ದೆಗೆಡಿಸಿದೆ. ಬೆಟಗೇರಿಯ ವಾಂಬೆ ಬಡಾವಣೆ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದ್ದು, ಜನರು ಪರಿತಪಿಸುವಂತಾಯಿತು. ಭಾರಿ ಮಳೆಯಿಂದ ರಾಜಕಾಲುವೆ ಒಡೆದು ಅಪಾರ ನೀರು ಬಡಾವಣೆಗೆ ನುಗ್ಗಿದ್ದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಇದರಿಂದ ಮಹಿಳೆಯರ ಕಣ್ಣೀರು ಹಾಕಿದರು.ರಾತ್ರಿಯಿಡೀ ಮನೆಯಲ್ಲಿನ ನೀರು ಹೊರಹಾಕಲು ಹರಸಾಹಸ ಪಡಬೇಕಾಯಿತು. ನಡುರಾತ್ರಿ ಬಡಾವಣೆಗೆ ಶಾಸಕ ಎಚ್.ಕೆ ಪಾಟೀಲ್ ಭೇಟಿ ನೀಡಿದರು.