ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಕಪ್ಪು ಬಂಗಾರವೆಂದು ಪ್ರಸಿದ್ಧವಾದ ಕಾಳು ಮೆಣಸಿನ ಬೆಲೆ ಈಗ ಏರಿಕೆಯ ಹಾದಿಯಲ್ಲಿದೆ. ಆದರೆ ಇದರ ಲಾಭ ಹೆಚ್ಚಿನ ಬೆಳೆಗಾರರಿಗೆ ದಕ್ಕದಂತಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಏಕಾ ಏಕಿ ಕುಸಿತ ಕಂಡಿದ್ದ ದರ ಅಂತೂ ಈಗ ಚೇತರಿಕೆ ಕಂಡಿದೆ. ಅಂದಿನ ದರಕ್ಕೆ ಹೋಲಿಸಿದರೆ ಈಗ ದುಪ್ಪಟ್ಟು ದರ ದಾಖಲಾಗಿದೆ. ಕಾಳುಮೆಣಸಿನ ಪ್ರಮುಖ ಮಾರುಕಟ್ಟೆಯಾದ ಶಿರಸಿಯಲ್ಲಿ ಕಳೆದ ಎರಡು ದಿನಗಳಿಂದ ಗರಿಷ್ಠ ದರ ಕ್ವಿಂಟಾಲ್ ಗೆ 60