ಹುಬ್ಬಳ್ಳಿ–ಬೆಳಗಾವಿ ರೈಲು ಸಂಚಾರ ಖಾಯಂ ಆಗಿ ರದ್ದುಗೊಂಡಿದೆ. ಮೈಸೂರಿನ ಅಶೋಕಪುರಂ–ಹುಬ್ಬಳ್ಳಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಬೆಳಗಾವಿ ವರೆಗೆ ವಿಸ್ತರಿಸಲಾಗಿದೆ. ಇದರಿಂದ ನವೆಂಬರ್ 1 ರಿಂದಲೇ ಜಾರಿಗೆ ಬರುವಂತೆ ಹುಬ್ಬಳ್ಳಿ–ಬೆಳಗಾವಿ ಫಾಸ್ಟ್ ಪ್ಯಾಸೆಂಜರ್ ರೈಲಿನ ಸೌಲಭ್ಯವನ್ನು ಖಾಯಂ ಆಗಿ ರದ್ದು ಮಾಡಲಾಗಿದೆ. ಹೀಗಂತ ನೈರುತ್ಯ ರೈಲ್ವೆ ತಿಳಿಸಿದೆ.ಮಹಾರಾಷ್ಟ್ರದ ಮಂಕಿ ಹಿಲ್–ಮುಂಬೈ ಸಮೀಪದ ಕರ್ಜತ್ ನಡುವೆ ರೈಲ್ವೆ ಸಂಬಂಧಿತ ಕಾಮಗಾರಿ ನಡೆಯಲಿರುವ ಕಾರಣ ನ. 3 ರಿಂದ 6, 10