ಕೋವಿಡ್ ಲಸಿಕೆ ಪಡೆಯದ ಹೊರತಾಗಿಯೂ ವಿಶ್ವ ನಂ.1 ಟೆನಿಸಿಗ ನೋವಾಕ್ ಜೋಕೋವಿಚ್ ಜೂನ್ನಲ್ಲಿ ಆರಂಭವಾಗಲಿರುವ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅನುಮತಿ ಲಭಿಸಿದೆ. 6 ಬಾರಿ ವಿಂಬಲ್ಡನ್ ಗೆದ್ದಿರುವ 34 ವರ್ಷದ ಜೋಕೋವಿಚ್ ಕಳೆದ 3 ಆವೃತ್ತಿಗಳಲ್ಲಿಯೂ ಚಾಂಪಿಯನ್ ಆಗಿದ್ದು, ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಲಿದ್ದಾರೆ..ಮೇ 22ರಿಂದ ಆರಂಭವಾಗಲಿರುವ ಫ್ರೆಂಚ್ ಓಪನ್ನಲ್ಲೂ ಜೋಕೋವಿಚ್ ಆಡಲಿದ್ದಾರೆ. ಇತ್ತೀಚೆಗೆ ಆಸ್ಪ್ರೇಲಿಯನ್ ಓಪನ್ ಆಡಲು ತೆರಳಿದ್ದ 20 ಗ್ರ್ಯಾನ್ ಸ್ಲಾಂಗಳ ಒಡೆಯ ಜೋಕೋವಿಚ್ರನ್ನು ಮೆಲ್ಬರ್ನ್ ವಿಮಾನ ನಿಲ್ದಾಣದಲ್ಲೇ ತಡೆಯಲಾಗಿತ್ತು. ಬಳಿಕ ಅವರನ್ನು ದೇಶದಿಂದಲೇ ಗಡಿಪಾರು ಮಾಡಲಾಗಿತ್ತು..ಇದೀಗ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅನುಮತಿ ಲಭಿಸಿದೆ.