ಬೆಂಗಳೂರು: ಹೆಬಗೋಡಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಬೆಂಕಿ ತಗುಲಿದಾಗ ಮನೆಯೊಳಗಿದ್ದ ವೃದ್ಧೆಯನ್ನು ಸಾಕು ನಾಯಿ ಕಾಪಾಡಿದ ಘಟನೆ ನಡೆದಿದೆ.ಸಂಪಿಗೆ ನಗರದಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ನಿನ್ನೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಮನೆಯಲ್ಲಿ ವೃದ್ಧೆ ಮತ್ತು ಸಾಕು ನಾಯಿ ಅಪ್ಪು ಮಾತ್ರ ಇದ್ದರು.ಮನೆಗೆ ಬೆಂಕಿ ತಗುಲುತ್ತಿದ್ದಂತೇ ನಾಯಿ ಸೆಕ್ಯುರಿಟಿ ಬಳಿ ಹೋಗಿ ಜೋರಾಗಿ ಬೊಗಳಿ ಆತನ ಗಮನ ಸೆಳೆದಿದೆ. ಬಳಿಕ ಅಪಾರ್ಟ್ ಮಂದಿಯನ್ನೂ ಜೋರಾಗಿ ಬೊಗಳಿ ಎಚ್ಚರಿಸಿದೆ. ಇದರಿಂದಾಗಿ