ಬೆಂಗಳೂರು: ಪಿ.ಜಿ ಮಾಲೀಕನ ಕೊಲೆ ಮಾಡಿ ಅಲ್ಲಿದ್ದ ಹಣವನ್ನು ದೋಚಿದ ಘಟನೆ ಬೆಂಗಳೂರಿನ ಬಿ.ಟಿ.ಎಂ. ಲೇಔಟ್ ಬಾರ್ ರೋಡನಲ್ಲಿ ನಡೆದಿದೆ. ತಿರುಮಲ ರೆಡ್ಡಿ(58) ಕೊಲೆಯಾದ ಪಿ.ಜಿ ಮಾಲೀಕ. ಪಿ.ಜಿಯಲ್ಲಿ ಅಡುಗೆ ಮಾಡುತ್ತಿದ್ದ ಬಿಹಾರಿ ಮೂಲದ ಅಡುಗೆ ಭಟ್ಟ ಕೊಲೆ ಮಾಡಿರುವ ಶಂಕೆ ಇದೆ. ನಿನ್ನೆ ರಾತ್ರಿ ಅವರಿಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿದ್ದು, ಕೊಲೆ ಮಾಡಿ ಅಲ್ಲಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿರಬಹುದು ಎಂಬ ಅನುಮಾನವಿದೆ. ತಿರುಮಲ ರೆಡ್ಡಿಯ ಮೃತದೇಹ