ಮೈತ್ರಿ ಸರ್ಕಾರದ ವೇಳೆ ನಡೆದಿತ್ತಾ ಫೋನ್ ಕದ್ದಾಲಿಕೆ

ಬೆಂಗಳೂರು| pavithra| Last Modified ಬುಧವಾರ, 14 ಆಗಸ್ಟ್ 2019 (11:12 IST)
ಬೆಂಗಳೂರು : ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟ ಸರ್ಕಾರದ ಅವಧಿಯಲ್ಲಿ ಹಲವು ರಾಜಕೀಯ ಮುಖಂಡರು, ಅಧಿಕಾರಿಗಳ ಫೋನ್ ಕರೆಗಳನ್ನೂ ಕದ್ದಾಲಿಕೆ ಮಾಡಲಿದೆ ಎಂಬ ಆರೋಪ ಕೇಳಿಬಂದಿದೆ.
ವಂಚನೆ ಪ್ರಕರಣವೊಂದರ ಆರೋಪಿಯ ಫೋನ್ ಕದ್ದಾಲಿಕೆ ಮಾಹಿತಿ ಸೋರಿಕೆಯಾದ ಬಳಿಕ ನಡೆಸಲಾದ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಮಾಜಿ ಮುಖ್ಯಮಂತ್ರಿಗಳ ಆಪ್ತ ಸಹಾಯಕರು, ಕೆಲ ಶಾಸಕರು, ಎಡಿಜಿಪಿ ದರ್ಜೆ ಅಧಿಕಾರಿಗಳು ಸೇರಿದಂತೆ ಹಲವರ ಫೋನ್ ಕರೆಗಳನ್ನು ಕದ್ದಾಲಿಸಲಾಗಿದೆ ಎಂದು ಹೇಳಲಾಗಿದೆ.


ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರದ ಪತನಕ್ಕೆ ಕಾರಣವಾಗುವ ಬೆಳವಣಿಗೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಅದನ್ನು ತಿಳಿಯಲು  ಈ ಕದ್ದಾಲಿಕೆ ನಡೆದಿದೆ ಎನ್ನಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :