ರಾಜ್ಯದಲ್ಲಿ ಧರ್ಮ ದಂಗಲ್ ನಡುವೆ ಮತ್ತೊಂದು ವಿವಾದ ಬೆಳಕಿಗೆ ಬಂದಿದೆ. ಪಡಿತರ ಚೀಟಿ ಹಿಂಭಾಗ ಏಸು ಕ್ರಿಸ್ತನ ಫೋಟೋ ಮುದ್ರಿಸಲಾಗಿದೆ, ರಾಮನಗರ ಜಿಲ್ಲೆಯ ಡಿಕೆಶಿ ಸ್ವಗ್ರಾಮ ದೊಡ್ಡ ಆಲಹಳ್ಳಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ದೊಡ್ಡ ಆಲಹಳ್ಳಿಯ ನ್ಯೂ ಪುಷ್ಪ ಸ್ಟೂಡಿಯೋದಲ್ಲಿ ಮುದ್ರಣವಾಗಿರುವುದು ಸಾಬೀತಾಗಿದೆ. ಇನ್ನು ಈ ವಿಚಾರ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಧಿಕಾರಿಗಳಿಗೆ ಶ್ರೀರಾಮಸೇನೆ ಮುಖಂಡರು ಮನವಿ ನೀಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.