ತಾವು ಹೇಳಿದ ಖಾತೆ ಕೊಟ್ಟಿಲ್ಲ ಎಂದು ಅಸಮಾಧಾನಗೊಂಡಿರುವ ಆನಂದ್ ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಮೌನಕ್ಕೆ ಶರಣಾಗಿದ್ದರು. ಎರಡು ದಿನಗಳಿಂದ ಮೌನವಾಗಿದ್ದ ಆನಂದ್ ಸಿಂಗ್ ವಿಜಯನಗರದಲ್ಲಿ ಸ್ವಾತಂತ್ರ್ಯ ದಿನಚಾರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಏನೂ ಮಾತನಾಡಲ್ಲ ಎಂದರು. ಇವತ್ತು ಸ್ವಾತಂತ್ರೋತ್ಸವ ಇರುವ ಕಾರಣ ನಾನು ಏನು ಮಾತಾಡಲ್ಲ. ಜಿಲ್ಲೆಯ ಅಭಿವೃದ್ದಿಗೆ ಸಂಬಂಧಪಟ್ಟಂತೆ ಮಾತ್ರ ಮಾತನಾಡುವೆ.